ಬ್ರೇಕಿಂಗ್
ವಿವಾಹಿತ ಧರ್ಮಗುರುವಿನೊಂದಿಗೆ ತೆರಳಿದ ಯುವತಿ; ಠಾಣೆಯಲ್ಲೇ ಕಣ್ಣೀರಿಟ್ಟ ಪೋಷಕರು!•ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಮಗು ಜನನ•ಕುಮಾರಧಾರೆಯ ಜಲಜಾಗೃತಿಗೆ ಸಂದ ಜಯ: ಉರುಂಬಿ ತಟದಲ್ಲಿ 'ಪಶ್ಚಿಮ ಘಟ್ಟ ಜೀವವೈವಿಧ್ಯ ಸಂರಕ್ಷಣಾ' ಸಂಕಲ್ಪದ ಶಂಖನಾದ•ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು•ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ & ಎಂ.ಎಚ್. ನಾಗರಾಜು•ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!•ಕಚ್ಚಾ ತೈಲದ ಬೆಲೆ ತೀವ್ರ ಕುಸಿತ& ಆದರೆ ಜನತೆಗಿಲ್ಲ ಇಳಿಕೆಯ ಲಾಭ ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ? ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ವಿವಾಹಿತ ಧರ್ಮಗುರುವಿನೊಂದಿಗೆ ತೆರಳಿದ ಯುವತಿ; ಠಾಣೆಯಲ್ಲೇ ಕಣ್ಣೀರಿಟ್ಟ ಪೋಷಕರು!•ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಮಗು ಜನನ•ಕುಮಾರಧಾರೆಯ ಜಲಜಾಗೃತಿಗೆ ಸಂದ ಜಯ: ಉರುಂಬಿ ತಟದಲ್ಲಿ 'ಪಶ್ಚಿಮ ಘಟ್ಟ ಜೀವವೈವಿಧ್ಯ ಸಂರಕ್ಷಣಾ' ಸಂಕಲ್ಪದ ಶಂಖನಾದ•ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು•ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ & ಎಂ.ಎಚ್. ನಾಗರಾಜು•ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!•ಕಚ್ಚಾ ತೈಲದ ಬೆಲೆ ತೀವ್ರ ಕುಸಿತ& ಆದರೆ ಜನತೆಗಿಲ್ಲ ಇಳಿಕೆಯ ಲಾಭ ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ? ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•
ಮಾರುಕಟ್ಟೆ ದರ
🪙ಚಿನ್ನ 24K (10 ಗ್ರಾಂ):₹78,450+320•
💍ಚಿನ್ನ 22K (10 ಗ್ರಾಂ):₹71,900+290•
🥈ಬೆಳ್ಳಿ (1 ಕೆಜಿ):₹96,200-450•
⛽ಪೆಟ್ರೋಲ್ (ರಾಯಚೂರು):₹103.12(0)•
🛢️ಡೀಸೆಲ್ (ರಾಯಚೂರು):₹89.20+0.12•
📈ಸೆನ್ಸೆಕ್ಸ್:81,245+0.8%•
📊ನಿಫ್ಟಿ 50:24,610+0.6%•
💵ಡಾಲರ್ (USD):₹84.10-0.05•
🪙ಚಿನ್ನ 24K (10 ಗ್ರಾಂ):₹78,450+320•
💍ಚಿನ್ನ 22K (10 ಗ್ರಾಂ):₹71,900+290•
🥈ಬೆಳ್ಳಿ (1 ಕೆಜಿ):₹96,200-450•
⛽ಪೆಟ್ರೋಲ್ (ರಾಯಚೂರು):₹103.12(0)•
🛢️ಡೀಸೆಲ್ (ರಾಯಚೂರು):₹89.20+0.12•
📈ಸೆನ್ಸೆಕ್ಸ್:81,245+0.8%•
📊ನಿಫ್ಟಿ 50:24,610+0.6%•
💵ಡಾಲರ್ (USD):₹84.10-0.05•
ಜಾಹೀರಾತುAdvertisement

ನೀಟ್ ಪೇಪರ್ ಸೋರಿಕೆ ಪ್ರಕರಣ: ವಿದ್ಯಾರ್ಥಿ ಹೋರಾಟಕ್ಕೆ ಮಣಿದ ಕೇಂದ್ರ; ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಶನಿವಾರ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿರುವುದಾಗಿ ಸಾಮಾಜಿಕ ಜಾಲತಾಣ X ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಮಹಾಂತೇಶ ನಾಯಕ ✔•ನವೆಂ 8,2026, 03:52 AM
👁4.6K ವೀಕ್ಷಣೆ2 ನಿಮಿಷ ಓದು
ನೀಟ್ ಪೇಪರ್ ಸೋರಿಕೆ ಪ್ರಕರಣ: ವಿದ್ಯಾರ್ಥಿ ಹೋರಾಟಕ್ಕೆ ಮಣಿದ ಕೇಂದ್ರ; ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಮುಖ್ಯಾಂಶಗಳು

  • •ದೆಹಲಿಯ ಜಂತರ್ ಮಂತರ್ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಳೆದ ಒಂದು ತಿಂಗಳಿನಿಂದ ಧರಣಿ ನಡೆಸುತ್ತಿದ್ದು, ದೇಶದ ವಿವಿಧ ರಾಜ್ಯಗಳಿಂದ ಬಂದ ಅಭ್ಯರ್ಥಿಗಳು ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
  • •"ದೇಶದ ಯುವಜನರ ಆಕಾಂಕ್ಷೆಗಳು, ಭಾವನೆಗಳು ಹಾಗೂ ನ್ಯಾಯಯುತ ನಿರೀಕ್ಷೆಗಳಿಗೆ ನಾನು ಅಪಾರ ಗೌರವ ನೀಡುತ್ತೇನೆ.
  • •ಪ್ರಧಾನಿಯವರ ನಾಯಕತ್ವದಲ್ಲಿ ದೇಶಸೇವೆ ಮಾಡಲು ಅವಕಾಶ ನೀಡಿದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ." ಮುಂದುವರಿದು ಅವರು, "ದೇಶದ ಯುವಶಕ್ತಿ ಗೊಂದಲದ ಬಲೆಗೆ ಸಿಲುಕಬಾರದು.
  • •ಯಾವುದೇ ವಿದ್ಯಾರ್ಥಿಯ ಭವಿಷ್ಯ ಕಾನೂನು ಸಂಕಷ್ಟಗಳಲ್ಲಿ ಸಿಲುಕದೇ, ಅವರು ತಮ್ಮ ಶಿಕ್ಷಣ ಮತ್ತು ವೃತ್ತಿಜೀವನದತ್ತ ಗಮನ ಹರಿಸಬೇಕು ಎಂಬ ಉದ್ದೇಶದಿಂದ ಗೌರವಾನ್ವಿತ ಪ್ರಧಾನಿಯವರಿಗೆ ನನ್ನ ರಾಜೀನಾಮೆ ಸಲ್ಲಿಸಿದ್ದೇನೆ" ಎಂದು ತಿಳಿಸಿದ್ದಾರೆ.

ನವದೆಹಲಿ:

ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದ್ದ ನೀಟ್ (NEET) ಪೇಪರ್ ಸೋರಿಕೆ ಹಾಗೂ ಪರೀಕ್ಷಾ ಅಕ್ರಮ ಪ್ರಕರಣ ಹೊಸ ರಾಜಕೀಯ ತಿರುವು ಪಡೆದಿದ್ದು, ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ವಿದ್ಯಾರ್ಥಿಗಳ ನಿರಂತರ ಹೋರಾಟದ ನಡುವೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶನಿವಾರ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿರುವುದಾಗಿ ಸಾಮಾಜಿಕ ಜಾಲತಾಣ X ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ದೆಹಲಿಯ ಜಂತರ್ ಮಂತರ್ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಳೆದ ಒಂದು ತಿಂಗಳಿನಿಂದ ಧರಣಿ ನಡೆಸುತ್ತಿದ್ದು, ದೇಶದ ವಿವಿಧ ರಾಜ್ಯಗಳಿಂದ ಬಂದ ಅಭ್ಯರ್ಥಿಗಳು ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಯ ಪ್ರಮುಖ ಬೇಡಿಕೆಗಳಲ್ಲಿ ಶಿಕ್ಷಣ ಸಚಿವರ ರಾಜೀನಾಮೆ, ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಹಾಗೂ ನೀಟ್ ಪೇಪರ್ ಸೋರಿಕೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂಬ ಮೂರು ಪ್ರಮುಖ ಅಂಶಗಳು ಸೇರಿದ್ದವು.

X ನಲ್ಲಿ ಭಾವನಾತ್ಮಕ ಸಂದೇಶ

ರಾಜೀನಾಮೆ ಘೋಷಿಸಿದ ಬಳಿಕ X ನಲ್ಲಿ ಬರೆದುಕೊಂಡಿರುವ ಧರ್ಮೇಂದ್ರ ಪ್ರಧಾನ್, ದೇಶದ ಯುವಜನರ ಭಾವನೆಗಳಿಗೆ ಗೌರವ ಸೂಚಿಸುವುದಾಗಿ ಹೇಳಿದ್ದಾರೆ.

"ದೇಶದ ಯುವಜನರ ಆಕಾಂಕ್ಷೆಗಳು, ಭಾವನೆಗಳು ಹಾಗೂ ನ್ಯಾಯಯುತ ನಿರೀಕ್ಷೆಗಳಿಗೆ ನಾನು ಅಪಾರ ಗೌರವ ನೀಡುತ್ತೇನೆ. ಭಾರತದ ಯುವಜನರ ಕನಸುಗಳನ್ನು ನನಸು ಮಾಡುವುದು ನಮ್ಮ ಸಾರ್ವಜನಿಕ ಜೀವನದ ನೈತಿಕ ಹೊಣೆಗಾರಿಕೆಯಾಗಿದೆ. ಪ್ರಧಾನಿಯವರ ನಾಯಕತ್ವದಲ್ಲಿ ದೇಶಸೇವೆ ಮಾಡಲು ಅವಕಾಶ ನೀಡಿದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ."

ಮುಂದುವರಿದು ಅವರು,

"ದೇಶದ ಯುವಶಕ್ತಿ ಗೊಂದಲದ ಬಲೆಗೆ ಸಿಲುಕಬಾರದು. ರಾಷ್ಟ್ರವಿರೋಧಿ ಶಕ್ತಿಗಳು ಈ ಪರಿಸ್ಥಿತಿಯ ಲಾಭ ಪಡೆಯಬಾರದು. ಯಾವುದೇ ವಿದ್ಯಾರ್ಥಿಯ ಭವಿಷ್ಯ ಕಾನೂನು ಸಂಕಷ್ಟಗಳಲ್ಲಿ ಸಿಲುಕದೇ, ಅವರು ತಮ್ಮ ಶಿಕ್ಷಣ ಮತ್ತು ವೃತ್ತಿಜೀವನದತ್ತ ಗಮನ ಹರಿಸಬೇಕು ಎಂಬ ಉದ್ದೇಶದಿಂದ ಗೌರವಾನ್ವಿತ ಪ್ರಧಾನಿಯವರಿಗೆ ನನ್ನ ರಾಜೀನಾಮೆ ಸಲ್ಲಿಸಿದ್ದೇನೆ" ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಂಭ್ರಮ

ಶಿಕ್ಷಣ ಸಚಿವರ ರಾಜೀನಾಮೆ ಸುದ್ದಿ ಹೊರಬಿದ್ದ ಕೂಡಲೇ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆಮಾಡಿತು. ಘೋಷಣೆಗಳನ್ನು ಕೂಗಿ, ಪರಸ್ಪರ ಅಭಿನಂದಿಸಿಕೊಂಡ ವಿದ್ಯಾರ್ಥಿಗಳು ತಮ್ಮ ಹೋರಾಟಕ್ಕೆ ಸಿಕ್ಕ ಮೊದಲ ದೊಡ್ಡ ಗೆಲುವೆಂದು ಬಣ್ಣಿಸಿದರು.

CJP ಸಂಸ್ಥಾಪಕರ ಪ್ರತಿಕ್ರಿಯೆ

ಪ್ರತಿಭಟನೆಗೆ ನೇತೃತ್ವ ನೀಡುತ್ತಿದ್ದ CJP (ಕಾಕ್ರೋಚ್ ಜನತಾ ಪಾರ್ಟಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಾತನಾಡಿ,

"ಈ ಸರ್ಕಾರದಲ್ಲಿ ಯಾರೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ನಾವು ಅದನ್ನು ಮಾಡಿ ತೋರಿಸಿದ್ದೇವೆ. ಇದು ವಿದ್ಯಾರ್ಥಿ ಶಕ್ತಿಯ ಗೆಲುವು," ಎಂದು ಜಂತರ್ ಮಂತರ್ ವೇದಿಕೆಯಿಂದ ಘೋಷಿಸಿದರು.

ಇದೇ ವೇಳೆ CJP ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ "ವಿದ್ಯಾರ್ಥಿ ಶಕ್ತಿ ಚಿರಾಯುವಾಗಲಿ" ಎಂದು ಪೋಸ್ಟ್ ಮಾಡಿದೆ.

ಮಾತುಕತೆ ಬಳಿಕ ಬೆಳವಣಿಗೆ

ಶುಕ್ರವಾರ ಕೇಂದ್ರ ಸರ್ಕಾರ ಹಾಗೂ ಪ್ರತಿಭಟನಾಕಾರರ ನಡುವೆ ನಡೆದ ಎರಡನೇ ಹಂತದ ಮಾತುಕತೆಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಹಾಗೂ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನೆರವು ನೀಡುವ ಕುರಿತು ಸರ್ಕಾರ ಸಕಾರಾತ್ಮಕ ಭರವಸೆ ನೀಡಿತ್ತು. ಆದರೆ ಶಿಕ್ಷಣ ಸಚಿವರ ರಾಜೀನಾಮೆ ಕುರಿತು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ.

ಆದರೆ ಶನಿವಾರ ಮೂರನೇ ಹಂತದ ಮಾತುಕತೆಗೆ ಕೆಲವೇ ಗಂಟೆಗಳ ಮುನ್ನ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ದೇಶಾದ್ಯಂತ ವ್ಯಾಪಿಸಿದ್ದ ಹೋರಾಟ

ನೀಟ್ ಪೇಪರ್ ಸೋರಿಕೆ ಪ್ರಕರಣದ ಬಳಿಕ ಆರಂಭವಾದ ವಿದ್ಯಾರ್ಥಿ ಚಳವಳಿ ದೆಹಲಿಗೆ ಮಾತ್ರ ಸೀಮಿತವಾಗದೆ ದೇಶದ ಹಲವು ನಗರಗಳಿಗೆ ವ್ಯಾಪಿಸಿತ್ತು. ವಿವಿಧ ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು ಹಾಗೂ ಪ್ರತಿಪಕ್ಷಗಳ ಬೆಂಬಲದೊಂದಿಗೆ ಈ ಹೋರಾಟ ರಾಷ್ಟ್ರಮಟ್ಟದ ಚರ್ಚೆಯ ವಿಷಯವಾಗಿತ್ತು.

ಈ ನಡುವೆ ಸಮಸ್ತ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಬೇಕೆಂದು ಆಗ್ರಹಿಸಿದ್ದವು.

ಮುಂದಿನ ಬೆಳವಣಿಗೆಗಳತ್ತ ಚಿತ್ತ

ಶಿಕ್ಷಣ ಸಚಿವರ ರಾಜೀನಾಮೆಯೊಂದಿಗೆ ಪ್ರತಿಭಟನೆಯ ಪ್ರಮುಖ ಬೇಡಿಕೆ ಈಡೇರಿದರೂ, ನೀಟ್ ಪರೀಕ್ಷಾ ಅಕ್ರಮ ಪ್ರಕರಣದ ಸಂಪೂರ್ಣ ತನಿಖೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ, ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಹಾಗೂ ವಿದ್ಯಾರ್ಥಿಗಳ ವಿಶ್ವಾಸ ಮರುಸ್ಥಾಪನೆಗೆ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಇದೀಗ ದೇಶದ ಗಮನ ಸೆಳೆದಿದೆ.

ಜಾಹೀರಾತುAdvertisement

📢 ಸಂಪಾದಕೀಯ ತಿದ್ದುಪಡಿ ಮತ್ತು ಸ್ಪಷ್ಟೀಕರಣ:

ಈ ಸುದ್ದಿಯಲ್ಲಿ ತಪ್ಪು ಕಂಡುಬಂದರೆ ನಮ್ಮ ಸಂಪಾದಕೀಯ ತಂಡಕ್ಕೆ ತಿಳಿಸಿ, ನಾವು ಸರಿಪಡಿಸುತ್ತೇವೆ. ಇಮೇಲ್ ಮಾಡಿ: news@sirwar360.in ಅಥವಾ ಕರೆ ಮಾಡಿ: +91 94480 36036.

Comments (0)

Join or log in to comment.

    ಸಂಬಂಧಿತ ಸುದ್ದಿಗಳು

    ಅಮೆರಿಕದ ಸೆನೆಟ್‌ನಲ್ಲಿ ಇತಿಹಾಸ ನಿರ್ಮಿಸಿದ ಡಾ. ಅಬ್ದುಲ್ ಎಲ್-ಸಯೀದ್; ಮೊದಲ ಮುಸ್ಲಿಂ ಸೆನೆಟರ್ ಎಂಬ ಹೆಗ್ಗಳಿಕೆ – ಭಟ್ಕಳದ ಅಳಿಯನ ಸಾಧನೆಗೆ ಕರಾವಳಿಯಲ್ಲಿ ಸಂಭ್ರಮ!India

    ಅಮೆರಿಕದ ಸೆನೆಟ್‌ನಲ್ಲಿ ಇತಿಹಾಸ ನಿರ್ಮಿಸಿದ ಡಾ. ಅಬ್ದುಲ್ ಎಲ್-ಸಯೀದ್; ಮೊದಲ ಮುಸ್ಲಿಂ ಸೆನೆಟರ್ ಎಂಬ ಹೆಗ್ಗಳಿಕೆ – ಭಟ್ಕಳದ ಅಳಿಯನ ಸಾಧನೆಗೆ ಕರಾವಳಿಯಲ್ಲಿ ಸಂಭ್ರಮ!

    ವಾಷಿಂಗ್ಟನ್ / ಮಿಚಿಗನ್ / ಭಟ್ಕಳ: ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ. ಮಿಚಿಗನ್ ರಾಜ್ಯದಿಂದ ಅಮೆರಿಕದ ಸೆನೆಟ್‌ಗೆ ಆಯ್ಕೆಯಾಗಿರುವ ಡಾ. ಅಬ್ದುಲ್ ಎಲ್-ಸಯೀದ್…

    12 ಗಂಟೆ ಹಿಂದೆ3.0K ವೀಕ್ಷಣೆ
    ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರ ಅಪ್ರತಿಮ ಶೌರ್ಯ: ರಕ್ತಸಿಕ್ತ ಸ್ಥಿತಿಯಲ್ಲೂ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್India

    ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರ ಅಪ್ರತಿಮ ಶೌರ್ಯ: ರಕ್ತಸಿಕ್ತ ಸ್ಥಿತಿಯಲ್ಲೂ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್

    ~ವಿಂಗ್‌ ಕಮಾಂಡರ್‌ ಸುದರ್ಶನ್ **** ಸೆಪ್ಟೆಂಬರ್ 30, 2026 ರಂದು, ದುಬೈನಿಂದ ತೆಲ್ ಅವೀವ್‌ಗೆ ಹಾರುತ್ತಿದ್ದ ಫ್ಲೈದುಬೈ ಎಫ್‌ಝೆಡ್1073 (Flydubai Flight FZ1073) ವಿಮಾನದಲ್ಲಿ ಸಂಭವಿಸಿದ…

    13 ಗಂಟೆ ಹಿಂದೆ2.7K ವೀಕ್ಷಣೆ

    ನಮ್ಮ ವಾಟ್ಸಾಪ್ ಗುಂಪಿಗೆ ಸೇರಿ

    ತಾಜಾ ಸುದ್ದಿ ಮೊದಲು ನಿಮ್ಮ ಮೊಬೈಲ್‌ಗೆ.

    ಕ್ಷಣ ಕ್ಷಣದ ಸುದ್ದಿಸಂಪೂರ್ಣ ಉಚಿತವರದಿಗಾರರ ನೇರ ಅಪ್‌ಡೇಟ್
    ಈಗ ಸೇರಿ