ಬ್ರೇಕಿಂಗ್
ವಿವಾಹಿತ ಧರ್ಮಗುರುವಿನೊಂದಿಗೆ ತೆರಳಿದ ಯುವತಿ; ಠಾಣೆಯಲ್ಲೇ ಕಣ್ಣೀರಿಟ್ಟ ಪೋಷಕರು!•ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಮಗು ಜನನ•ಕುಮಾರಧಾರೆಯ ಜಲಜಾಗೃತಿಗೆ ಸಂದ ಜಯ: ಉರುಂಬಿ ತಟದಲ್ಲಿ 'ಪಶ್ಚಿಮ ಘಟ್ಟ ಜೀವವೈವಿಧ್ಯ ಸಂರಕ್ಷಣಾ' ಸಂಕಲ್ಪದ ಶಂಖನಾದ•ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು•ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ & ಎಂ.ಎಚ್. ನಾಗರಾಜು•ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!•ಕಚ್ಚಾ ತೈಲದ ಬೆಲೆ ತೀವ್ರ ಕುಸಿತ& ಆದರೆ ಜನತೆಗಿಲ್ಲ ಇಳಿಕೆಯ ಲಾಭ ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ? ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ವಿವಾಹಿತ ಧರ್ಮಗುರುವಿನೊಂದಿಗೆ ತೆರಳಿದ ಯುವತಿ; ಠಾಣೆಯಲ್ಲೇ ಕಣ್ಣೀರಿಟ್ಟ ಪೋಷಕರು!•ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಮಗು ಜನನ•ಕುಮಾರಧಾರೆಯ ಜಲಜಾಗೃತಿಗೆ ಸಂದ ಜಯ: ಉರುಂಬಿ ತಟದಲ್ಲಿ 'ಪಶ್ಚಿಮ ಘಟ್ಟ ಜೀವವೈವಿಧ್ಯ ಸಂರಕ್ಷಣಾ' ಸಂಕಲ್ಪದ ಶಂಖನಾದ•ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು•ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ & ಎಂ.ಎಚ್. ನಾಗರಾಜು•ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!•ಕಚ್ಚಾ ತೈಲದ ಬೆಲೆ ತೀವ್ರ ಕುಸಿತ& ಆದರೆ ಜನತೆಗಿಲ್ಲ ಇಳಿಕೆಯ ಲಾಭ ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ? ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•
ಮಾರುಕಟ್ಟೆ ದರ
🪙ಚಿನ್ನ 24K (10 ಗ್ರಾಂ):₹78,450+320•
💍ಚಿನ್ನ 22K (10 ಗ್ರಾಂ):₹71,900+290•
🥈ಬೆಳ್ಳಿ (1 ಕೆಜಿ):₹96,200-450•
⛽ಪೆಟ್ರೋಲ್ (ರಾಯಚೂರು):₹103.12(0)•
🛢️ಡೀಸೆಲ್ (ರಾಯಚೂರು):₹89.20+0.12•
📈ಸೆನ್ಸೆಕ್ಸ್:81,245+0.8%•
📊ನಿಫ್ಟಿ 50:24,610+0.6%•
💵ಡಾಲರ್ (USD):₹84.10-0.05•
🪙ಚಿನ್ನ 24K (10 ಗ್ರಾಂ):₹78,450+320•
💍ಚಿನ್ನ 22K (10 ಗ್ರಾಂ):₹71,900+290•
🥈ಬೆಳ್ಳಿ (1 ಕೆಜಿ):₹96,200-450•
⛽ಪೆಟ್ರೋಲ್ (ರಾಯಚೂರು):₹103.12(0)•
🛢️ಡೀಸೆಲ್ (ರಾಯಚೂರು):₹89.20+0.12•
📈ಸೆನ್ಸೆಕ್ಸ್:81,245+0.8%•
📊ನಿಫ್ಟಿ 50:24,610+0.6%•
💵ಡಾಲರ್ (USD):₹84.10-0.05•
ಜಾಹೀರಾತುAdvertisement

ಸುಂದರ ಧನುಷ್ಕೋಡಿಯನ್ನು ವಿರೂಪಗೊಳಿಸಿದ್ದೇಕೆ?

60ರ ದಶಕದ ಸುನಾಮಿಗೆ ತುತ್ತಾಗಿ ಹಾಳಾಗಿರುವ ಅಂದಿನ ಜನವಸತಿ ಪ್ರದೇಶದ ಪೋಸ್ಟ್‌ ಆಫೀಸ್‌, ಚರ್ಚ್‌ , ಶಾಲೆ, ಮನೆ ಹೀಗೆ ಪಳೆಯುಳಿಕೆಗಳನ್ನು ಅದರ ಮೂಲ ರೂಪದಲ್ಲಿ ಫೋಟೋ ಕ್ಲಿಕ್ಕಿಸಿದಾಗ ಸಿಗುತ್ತಿದ್ದ ತೃಪ್ತಿ ಬೇರೆಯೇ.

ರೇಣುಕಾ ಪೂಜಾರ ✔•ನವೆಂ 8,2026, 12:05 AM
👁4.4K ವೀಕ್ಷಣೆ3 ನಿಮಿಷ ಓದು
ಸುಂದರ ಧನುಷ್ಕೋಡಿಯನ್ನು ವಿರೂಪಗೊಳಿಸಿದ್ದೇಕೆ?

ಮುಖ್ಯಾಂಶಗಳು

  • •ಪರಿಸರ ಕೆ.ಬಿ.ನೇತ್ರಾವತಿ ರಾಮೇಶ್ವರಂ ನಿಜಕ್ಕೂ ಒಂದು ದ್ವೀಪ, ಭಾರತ ಭೂಭಾಗದಿಂದ ಪಂಬನ್‌ ಬಳಿ ಸೇತುವೆ ನಿರ್ಮಿಸಿದ ಪರಿಣಾಮ ಅದೊಂದು ದ್ವೀಪ ಎಂದು ಭಾಸವಾಗುವುದೇ ಇಲ್ಲ.
  • •ಇಲ್ಲಿಂದ ಶ್ರೀಲಂಕಾ ಕೇವಲ 18 ಕಿ.ಮೀ .ಹಾಗಂತ ಬರಿಗಣ್ಣಿಗೆ ಕಾಣಲ್ಲ.
  • •ಇದನ್ನು ರಾಮಾಯಣದಲ್ಲಿ ವಾನರರು ಕಲ್ಲು ಹೊತ್ತು ರಾವಣನ ಲಂಕೆಗೆ ಕಟ್ಟಿದ ಸೇತುವೆ ಎಂದು ನಂಬಲಾಗಿದೆ.
  • •ಕಾಲ ಸಮಯ ಎಲ್ಲಾ ಮರೆತು ಬಿಟ್ಟು ಮೈಮರೆಯುವ ಸ್ಥಳ.

    60ರ ದಶಕದ ಸುನಾಮಿಗೆ ತುತ್ತಾಗಿ ಹಾಳಾಗಿರುವ ಅಂದಿನ  ಜನವಸತಿ ಪ್ರದೇಶದ ಪೋಸ್ಟ್‌ ಆಫೀಸ್‌, ಚರ್ಚ್‌ , ಶಾಲೆ, ಮನೆ ಹೀಗೆ ಪಳೆಯುಳಿಕೆಗಳನ್ನು ಅದರ ಮೂಲ ರೂಪದಲ್ಲಿ ಫೋಟೋ ಕ್ಲಿಕ್ಕಿಸಿದಾಗ  ಸಿಗುತ್ತಿದ್ದ ತೃಪ್ತಿ ಬೇರೆಯೇ.

ಪರಿಸರ

ಕೆ.ಬಿ.ನೇತ್ರಾವತಿ

        ರಾಮೇಶ್ವರಂ ನಿಜಕ್ಕೂ ಒಂದು ದ್ವೀಪ, ಭಾರತ ಭೂಭಾಗದಿಂದ ಪಂಬನ್‌ ಬಳಿ ಸೇತುವೆ ನಿರ್ಮಿಸಿದ ಪರಿಣಾಮ ಅದೊಂದು ದ್ವೀಪ ಎಂದು ಭಾಸವಾಗುವುದೇ ಇಲ್ಲ. ಈ ರಾಮೇಶ್ವರಂನ ತುದಿ ಹಾಗೂ ಇಂಡಿಯಾದ ತುತ್ತ ತುದಿಯ ಭೂಮಿ ಧನುಷ್ಕೋಡಿ. ಇಲ್ಲಿಂದ ಶ್ರೀಲಂಕಾ ಕೇವಲ 18 ಕಿ.ಮೀ .ಹಾಗಂತ ಬರಿಗಣ್ಣಿಗೆ ಕಾಣಲ್ಲ. ಈ ಧನುಷ್ಕೋಡಿಯಿಂದ ಶ್ರೀಲಂಕಾವರೆಗೆ ರಾಮ ಸೇತು ಎಂದು ಕರೆಯುವ ಅರೆಬರೆ ನೀರಲ್ಲಿ ಮುಳುಗಿರುವ ಹವಳಗಳ ದಿಬ್ಬ. ಇದನ್ನು ರಾಮಾಯಣದಲ್ಲಿ ವಾನರರು ಕಲ್ಲು ಹೊತ್ತು ರಾವಣನ ಲಂಕೆಗೆ ಕಟ್ಟಿದ ಸೇತುವೆ ಎಂದು ನಂಬಲಾಗಿದೆ. ಧನುಷ್ಕೋಡಿಯ ಮೂರೂ ಕಡೆ ಸಮುದ್ರ, ಒಂದಷ್ಟು ಚೂರು ಭೂಭಾಗ ನೋಡಲು  ಕಣ್ಣೆರಡು ಸಾಲದು. ಕಾಲ ಸಮಯ ಎಲ್ಲಾ ಮರೆತು ಬಿಟ್ಟು ಮೈಮರೆಯುವ ಸ್ಥಳ.

ರಸ್ತೆ ಮಾಡುವ ಮೊದಲು ಧನುಷ್ಕೋಡಿ ಹೀಗಿತ್ತು ನೋಡಿ

ನಂತರ

     ಹಿಂದೆ ಜನ ಧನುಷ್ಕೋಡಿ ನೋಡಬೇಕೆಂದರೆ ಜನರು ರಾಮೇಶ್ವರ ದೇವಸ್ಥಾನ ದ ಭೇಟಿ ನಂತರ ಅದಕ್ಕೆಂದೇ ಒಂದು ದಿನ ಮೀಸಲಿರಿಸಿ, ಬೆಳಿಗ್ಗೆನೇ ತಾವು ಉಳಿದುಕೊಂಡ ಹೋಟೆಲ್‌ ನವರು ಗೊತ್ತುಪಡಿಸಿದ ಜೀಪ್ ನಲ್ಲಿ ಅಲ್ಲಿಗೆ ತೆರಳಬೇಕಿತ್ತು. ಇಲ್ಲವಾದಲ್ಲಿ  ಧನುಷ್ಕೋಡಿಯ ಗೊತ್ತುಪಡಿಸಿದ ಜಾಗದವರೆಗೆ ನಿಮ್ಮ ಸ್ವಂತ ಕಾರು, ಇತರೆ ವಾಹನಗಳಲ್ಲಿ ತೆರಳಿ ಅಲ್ಲಿ ಮರಳು ಮೇಲೆ ಸಾಗಲೆಂದೇ ಇದ್ದ ಜೀಪ್‌ ಗಳಿಗೆ ಒಬ್ಬರಿಗೆ ಇಂತಿಷ್ಟು ಅಂತ ದುಡ್ಡು ಕೊಟ್ಟು ಧನುಷ್ಕೋಡಿ ಭಾರತದ ಭೂ ಭಾಗದ ತುತ್ತ ತುದಿ ನೋಡುವ ಅನುಭವ ಪಡೆಯಲು ತೆರಳುತ್ತಿದ್ದರು. ಅಲ್ಲಿಗೆ ತೆರಳಿದ ನಂತರ ಜೀಪ್‌ ನವರು ನಿಮಗಾಗಿ ಒಂದರ್ದ ಘಂಟೆ ಅಲ್ಲಿ ಓಡಾಡಲು ನೀರಿನಲ್ಲಿ ಆಡಲು ಸಮಯ ಕೊಡುತ್ತಿದ್ದರು. ದೂರದಲ್ಲಿ ಕಾಣುವ ರಾಮ ಸೇತುವನ್ನು ತೋರಿಸುತ್ತಿದ್ದರು. ಅದೇ ರೀತಿ ಎರಡು ಸಮುದ್ರಗಳು ಕೂಡುವ ಹಿಂದೂ ಮಹಾಸಾಗರ (ಗಲ್ಫ್‌  ಆಫ್‌ ಮನ್ನಾರ್) ಮತ್ತು ಬಂಗಾಳ ಕೊಲ್ಲಿ ಸಮುದ್ರಗಳು ಸೇರುವ ಜಾಗವನ್ನು ಕೂಡ ತೋರಿಸುತ್ತಿದ್ದರು. ಬಂಗಾಲ ಕೊಲ್ಲಿ  ಸಮುದ್ರ ಹಸಿರು ನೀಲಿ ಬಣ್ಣದ್ದಾದರೆ ಹಿಂದೂ ಮಹಾಸಾಗರ/ಬೇ ಆಫ್‌ ಮನ್ನಾರ್‌  ನೀಲಿ  ಬಣ್ಣಕ್ಕೆ ಕಾಣುತ್ತದೆ. ಅವು ಒಟ್ಟಿಗೇ ಸೇರುವಲ್ಲಿ ಆ ಬಣ್ಣಗಳ  ಸಮ್ಮಿಲನ ನಿಮ್ಮನ್ನು ಸಮ್ಮೋಹನಗೊಳಿಸುತ್ತದೆ. ನೆತ್ತಿ ಮೇಲೆ ಸೂರ್ಯನ ಬಿಸಿಲಾದರೆ ಕಾಲ ಕೆಳಗೆ ತಣ್ಣಗಿನ ಸಮುದ್ರದ ಅಲೆಗಳಲ್ಲಿ ಆಡುವುದು ಸುಂದರವಾದ ಕನಸೆನಿಸುತ್ತಿತ್ತು. ಇನ್ನಷ್ಟು ಹೊತ್ತು ಅಲ್ಲೇ ಕಾಲ ಕಳೆಯಬೇಕೆನಿಸುತ್ತದೆ.

    ಮಧ್ಯಾಹ್ನ 12 ಘಂಟೆಗೆ ಮುಂಚೆ ಅಥವಾ ಸಾಯಂಕಾಲದ ಹೊತ್ತಾದಲ್ಲಿ ಸಂಜೆ 5 ಕ್ಕೆ ಮುಂಚೆ   ಸಮುದ್ರದ  ನೀರಿನ ಹರಿವು ಏರುತ್ತದೆಯಾದ್ದರಿಂದ ಆ ಸಮಯಕ್ಕೆ ಮುಂಚೆ ನಿಮ್ಮನ್ನು ಅಲ್ಲಿಂದ ಹೊರಡಿಸುತ್ತ್ತಾರೆ.   ನೀರು ಏರಿದ ನಂತರ ಜೀಪು ನೀರಿನ ಮೇಲೆ ಓಡಲು ಆಗದ ಕಾರಣ ಅಲ್ಲಿಂದ ಹೊರಟು ಬಿಡುತ್ತಿದ್ದರು.

    ಜನ ರಾಮೇಶ್ವರಂ ನಿಂದ ಅದಕ್ಕೆಂದೇ ನಿಗದಿಪಡಿಸಿದ್ದ ಜಾಗಕ್ಕೆ ತೆರಳಿ ಅಲ್ಲಿಂದ ಮುಂದಕ್ಕೆ ಮರಳಿನ ಮೇಲೆ ಸಾಗುವ ಜೀಪ್‌ ಗಳನ್ನು ಹತ್ತಿ ಅವರಿಗೆ ಇಂತಿಷ್ಟು ಹಣ ಕೊಟ್ಟು ಸುಂದರವಾದ ಎರಡು ಸಮುದ್ರ ಸೇರುವ ಧನುಷ್ಕೋಡಿಯನ್ನು ಕಣ್ತುಂಬಿಕೊಳ್ಳಬಹುದಿತ್ತು, ಅಥವಾ ತಾವು ಉಳಿದುಕೊಂಡ ಹೋಟೆಲ್‌ ನವರೇ ಅದಕ್ಕೆಂದೇ ಮೊದಲೇ ಬುಕ್‌ ಮಾಡಿದರೆ ತಮ್ಮದೇ ಜೀಪ್‌ ಗಳಲ್ಲಿ ತೆರಳುವ ವ್ಯವಸ್ಥೆ ಮಾಡುತ್ತಿದ್ದರು.    12 ಗಂಟೆಗೆ ಸಮುದ್ರದ ನೀರು ಏರುತ್ತದೆ ಆಗ ವಾಹನಗಳು ಹೋಗುವುದು ಕಷ್ಟ ಅಂತ ಬೆಳಗ್ಗೆ ಬೇಗನೆ 9 ಗಂಟೆಗೆ ಹೊರಡಿಸಿ 12 ಗಂಟೆಗೆ ಮುಂಚೆ ಕರೆತರುತ್ತಿದ್ದರು. ಸಂಜೆ ಕೂಡ ಹಾಗೆಯೇ ಕೆಲವು ಸಮಯದ ನಂತರ ಸಮುದ್ರದ ನೀರು ಹೆಚ್ಚುಗುವುದರಿಂದ ಆ ಸಮಯಕ್ಕೆ ಮುಂಚೆ ಅಲ್ಲಿಂದ ಜನರನ್ನು ಹೊರಡಿಸಲಾಗುತ್ತಿತ್ತು. 

    60ರ ದಶಕದ ಸುನಾಮಿಗೆ ತುತ್ತಾಗಿ ಹಾಳಾಗಿರುವ ಅಂದಿನ  ಜನವಸತಿ ಪ್ರದೇಶದ ಪೋಸ್ಟ್‌ ಆಫೀಸ್‌, ಚರ್ಚ್‌ , ಶಾಲೆ, ಮನೆ ಹೀಗೆ ಪಳೆಯುಳಿಕೆಗಳನ್ನು ಅದರ ಮೂಲ ರೂಪದಲ್ಲಿ ಫೋಟೋ ಕ್ಲಿಕ್ಕಿಸಿದಾಗ  ಸಿಗುತ್ತಿದ್ದ ತೃಪ್ತಿ ಬೇರೆಯೇ.

ಆದರೆ ಈಗ ಅಭಿವೃದ್ಧಿಗೆ ತುತ್ತಾಗಿ ಈ ಎಲ್ಲಾ ವ್ಯವಸ್ಥೆ ಹಾಳಾಗಿದೆ.

   ಧನುಷ್ಕೋಡಿಯಲ್ಲಿ ಭೂಮಿ ತುದಿಯವರೆಗೂ 2017-18ರಲ್ಲಿ ದೊಡ್ಡ ಡಾಂಬರು ರಸ್ತೆ ಮಾಡಲಾಗಿದೆ. ಇದರಿಂದ ನೀವು ನಿಮ್ಮ ವಾಹನದಲ್ಲೇ ತುದಿವರೆಗೆ ಸಾಗಬಹುದು. ಇದರಿಂದ ಕಷ್ಟ ಏನು ಗೊತ್ತಾ?

     ಪದಗಳಲ್ಲಿ ವಿವರಿಸಲಾಗದಷ್ಟು ತುಂಬಾ ವಾಹನ ದಟ್ಟಣೆ, ಅಡಾ ದಿಡ್ಡಿ  ವಾಹನ ಪಾರ್ಕಿಂಗ್‌, ಹಾರಾಟ ಚೀರಾಟ, ಕಸದ ರಾಶಿ, ಮಾರಾಟಗಾರರ ಹಾವಳಿ ಎಲ್ಲವೂ ಇದೆ.  ಆದರೆ ಕಣ್ಣಿಗೆ ಸುಂದರವಾಗಿ ಕಾಣಲು ಸಮುದ್ರ ಅದರೊಡನಾಡಲು ಅಲೆಗಳ ಮಿಳಿತ ನಿಮಗೆ ಸಿಗದು, ಕಾರಣ ಬರೀ ರಸ್ತೆ ನಿರ್ಮಿಸಲು ಸಮುದ್ರದ ಉದ್ದಕ್ಕೂ ದೊಡ್ಡ ದೊಡ್ಡ ಸೈಜು ಗಲ್ಲುಗಳನ್ನು ಹಾಕಿ ನೀವು ಸಮುದ್ರದ ಹತ್ತಿರಕ್ಕೆ ಮುಂಚೆ ತೆರಳುತ್ತಿದ್ದ ರೀತಿ ತೆರಳಲು ಅವಕಾಶವಿಲ್ಲದಂತೆ ಮಾಡಲಾಗಿದೆ.

     ಇದೆಂತಹ ಅಭಿವೃದ್ಧಿ?. ಒಂದು ಸುಂದರವಾದ ಬೀಚ್‌ ಮಾಯವಾಯಿತು. ಯಾವುದೇ ಅಭಿವೃದ್ಧಿ ಪ್ರಕೃತಿಯ   ಆಸ್ವಾದನೆಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು, ಆದರೆ ಇದು ನಡೆದು ಹೋಗಿದೆ. ಈ ರಸ್ತೆ ನಿರ್ಮಿಸಿದ ಕಂಟ್ರಾಕ್ಟರ್‌ ಗೆ ಒಂದಷ್ಟು ಕೋಟಿಗಳು ಸಿಕ್ಕಿರಬಹುದು. ಆದರೆ ತಾವು ಏನನ್ನು ಕಳೆದುಕೊಂಡಿದ್ದೇವೆ ಎಂಬುದರ ಪರಿವೇ ಇಲ್ಲದ ಜನ ಅಲ್ಲಿ ನಿರ್ಮಿಸಿರುವ ಅಶೋಕ ಸ್ಥಂಬದ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಬರೀ ಪಾಯಿಂಟ್‌ ಟು ಪಾಯಿಂಟ್‌ ಟೂರಿಸ್ಟ್‌ ಗಳು ಅಷ್ಟೇ ಇವರು. ಪಯಣಿಗರಲ್ಲ.

     ಅದೇ ರೀತಿ ಸಮುದ್ರದ ಎರಡು ರೀತಿಯ ಬಣ್ಣ , ತಿಳಿಹಸಿರು ಮಿಶ್ರಿತ  ಬೇ ಆಫ್‌ ಬೆಂಗಾಲ್‌ , ಕಡು ನೀಲಿ ಬಣ್ಣದ ಬೇ ಆಫ್‌ ಮನ್ನಾರ್‌ (ಹಿಂದೂ ಮಹಾ ಸಾಗರ) ನಿಮಗೆ ಕಾಣ ಸಿಗದು , ಅದೇ ರೀತಿ ಸುನಾಮಿಯಲ್ಲಿ ಉಳಿದ ಪಳೆಯುಳಿಕೆಗಳನ್ನು ಮರಳಲ್ಲಿ ಹೂತು ಹೋಗಿವೆ ಅವನ್ನು ಕ್ಲೀನ್‌ ಮಾಡಲು ಹತ್ತಿರಕ್ಕೆ ಹೋಗಲು ಆಗದು ಅಟ್ಟಣಿಗೆ ರೀತಿ ಮಾಡಿ ಜನ ಹೋಗಿ ಬರಲು ವ್ಯವಸ್ಥೆ ಮಾಡಲಾಗಿದೆ ಇದರಿಂದ ನೀವು ಅದರ ಹತ್ತಿರ ತೆರಳಿ ಫೋಟೋ ಕ್ಲಿಕ್ಕಿಸುವ ಅದರ ಭೀಕರತೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

    ಅದೇ ರೀತಿ ಅದಕ್ಕೆಂದೇ ಮೀಸಲಿದ್ದ ಜೀಪಿನಲ್ಲಿ ತೆರಳುವಾಗ ಅವಶ್ಯಕತೆ ಇದ್ದ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದ ಜನ  ಕಡಿಮೆ ಕಸ ಹಂಡುತ್ತಿದ್ದರು.  ಆದರೆ ಈಗ ಕಾರಿನಲ್ಲಿ ತುದಿವರೆಗೆ ತೆರಳಲು ಅವಕಾಶ ಇರುವುದರಿಂದ ಕಾರಿನಿಂದ ಏನು ಬೇಕು ಬೇಡ ಎಲ್ಲವನ್ನೂ ತೆಗೆದುಕೊಂಡು ಸಮುದ್ರದ ಹತ್ತಿರ ಹೋಗುವುದರ ಜೊತೆಗೆ ತಿಂದು ಬಿಸಾಡಿ ಹೋಗುವುದರಿಂದ ಜನ ಸಂದಣೆ ಜೊತೆಗೆ ಕಸದ ರಾಶೀ ಕೂಡ ಜಾಸ್ತಿ ಆಗಿದೆ.

     ಜನ ಎಂದಿನಂತೆ ಎಲ್ಲಾ ತಿಂಡಿಗಳನ್ನು ತಿಂದು ಎಲ್ಲೆಂದರಲ್ಲಿ ಎಸೆಯುವುದು ನಮ್ಮ ಪರಿಸರವನ್ನು ಸ್ವಷ್ಛ ವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎನ್ನುವುದರ ಪರಿವೇ ಇಲ್ಲದೆ ಬರೀ ಮಜಾ ಮಾಡುವುದು ನಮ್ಮ ಹಕ್ಕು ಎಂದು ನಡೆದುಕೊಳ್ಳುವುದು ನೋಡಿದರೆ ಮನಸ್ಸಿಗೆ ವಿಷಾದವಾಗುತ್ತದೆ.

ವ್ಯತ್ಯಾಸಗಳನ್ನು ಪೋಟೋದಲ್ಲಿ ಕಾಣಿರಿ.

ಜಾಹೀರಾತುAdvertisement

📢 ಸಂಪಾದಕೀಯ ತಿದ್ದುಪಡಿ ಮತ್ತು ಸ್ಪಷ್ಟೀಕರಣ:

ಈ ಸುದ್ದಿಯಲ್ಲಿ ತಪ್ಪು ಕಂಡುಬಂದರೆ ನಮ್ಮ ಸಂಪಾದಕೀಯ ತಂಡಕ್ಕೆ ತಿಳಿಸಿ, ನಾವು ಸರಿಪಡಿಸುತ್ತೇವೆ. ಇಮೇಲ್ ಮಾಡಿ: news@sirwar360.in ಅಥವಾ ಕರೆ ಮಾಡಿ: +91 94480 36036.

Comments (0)

Join or log in to comment.

    ಸಂಬಂಧಿತ ಸುದ್ದಿಗಳು

    ನಾಗರಿಕ ಭಾರತವೂ ಭಯೋತ್ಪಾದನೆಯ ಭೀತಿಯೂTravel

    ನಾಗರಿಕ ಭಾರತವೂ ಭಯೋತ್ಪಾದನೆಯ ಭೀತಿಯೂ

    ವರ್ತಮಾನ ನಾ ದಿವಾಕರ ಏಪ್ರಿಲ್‌ 22ರಂದು ಕಾಶ್ಮೀರದ ಪ್ರವಾಸಿ ತಾಣ ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರಿಂದ ನಡೆದಿರುವ ನರಮೇಧ ಮಾನವ ಸಮಾಜವನ್ನೇ ತಲ್ಲಣಗೊಳಿಸುವ ಒಂದು ಘಟನೆ. ಈ ದುರಂತದಲ್ಲಿ ಮಡಿದ 26…

    19 ಗಂಟೆ ಹಿಂದೆ6.0K ವೀಕ್ಷಣೆ
    ಆ ಕೆಂಬಣ್ಣದ ಸುಂದರ ಕಾಯುತ್ತಿದ್ದಾನೆ...,Travel

    ಆ ಕೆಂಬಣ್ಣದ ಸುಂದರ ಕಾಯುತ್ತಿದ್ದಾನೆ...,

    ಆ ಮೌನದ ಕಾಯುವಿಕೆಯಲ್ಲಿ; ನಿಶ್ಯಬ್ಧ ಧ್ಯಾನದಲ್ಲಿ; ಮನಸ್ಸು ನೂರಾರು ಕನಸುಗಳ ಹೆಣೆಯುತ್ತದೆ. ಪಕ್ಷಿಗಳು ತಾವಾಗಿಯೇ ಹಾರಿಬಂದು ಇಲ್ಲಿ ಈ ರೆಂಬೆ ಮೇಲೆ ಕೂತರೆ, ಅದಕ್ಕೆ ಹಸಿರಿನ ದಟ್ಟ ಈ ಹಿನ್ನೆಲೆ…

    20 ಗಂಟೆ ಹಿಂದೆ2.3K ವೀಕ್ಷಣೆ
    ಹೆಗ್ಗಾರಮನೆ ಗುಡ್ಡಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿಷೇಧTravel

    ಹೆಗ್ಗಾರಮನೆ ಗುಡ್ಡಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿಷೇಧ

    ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಪ್ರಕೃತಿ ಸೊಬಗಿನ ತಾಣವಾದ ಹೆಗ್ಗಾರಮನೆ ಗುಡ್ಡ (ಸೂರ್ಯಕಲ್ಯಾಣಿ ಗುಡ್ಡ) ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ರೀಲ್ಸ್‌ ಮತ್ತು…

    07 Nov 20263.4K ವೀಕ್ಷಣೆ
    ಮ
    Travel

    ಮಲೆನಾಡಿನ ಮಡಿಲಿನ ಮನಮೋಹಕ ತಾಣ: ಮತ್ತೀಘಟ್ಟಾ ಜಲಪಾತದ ವೈಭವಕ್ಕಿಲ್ಲ ಸಾಟಿ

    ಉತ್ತರ ಕನ್ನಡ ಜಿಲ್ಲೆಯ ಸಹ್ಯಾದ್ರಿ ಪರ್ವತ ಶ್ರೇಣಿಯ ಹಸಿರು ಸೊಬಗಿನ ನಡುವೆ ಅಡಗಿರುವ ಮತ್ತೀಘಟ್ಟಾ ಜಲಪಾತ ನೈಜ ವೈಭವವನ್ನು ಅನಾವರಣಗೊಳಿಸುತ್ತಿದೆ. ಮುಂಗಾರಿನ ಸಂದರ್ಭದಲ್ಲಂತೂ ಇದರ ದೃಶ್ಯ ವೈಭವ…

    07 Nov 20261.9K ವೀಕ್ಷಣೆ

    ನಮ್ಮ ವಾಟ್ಸಾಪ್ ಗುಂಪಿಗೆ ಸೇರಿ

    ತಾಜಾ ಸುದ್ದಿ ಮೊದಲು ನಿಮ್ಮ ಮೊಬೈಲ್‌ಗೆ.

    ಕ್ಷಣ ಕ್ಷಣದ ಸುದ್ದಿಸಂಪೂರ್ಣ ಉಚಿತವರದಿಗಾರರ ನೇರ ಅಪ್‌ಡೇಟ್
    ಈಗ ಸೇರಿ