ಬ್ರೇಕಿಂಗ್
ವಿವಾಹಿತ ಧರ್ಮಗುರುವಿನೊಂದಿಗೆ ತೆರಳಿದ ಯುವತಿ; ಠಾಣೆಯಲ್ಲೇ ಕಣ್ಣೀರಿಟ್ಟ ಪೋಷಕರು!•ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಮಗು ಜನನ•ಕುಮಾರಧಾರೆಯ ಜಲಜಾಗೃತಿಗೆ ಸಂದ ಜಯ: ಉರುಂಬಿ ತಟದಲ್ಲಿ 'ಪಶ್ಚಿಮ ಘಟ್ಟ ಜೀವವೈವಿಧ್ಯ ಸಂರಕ್ಷಣಾ' ಸಂಕಲ್ಪದ ಶಂಖನಾದ•ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು•ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ & ಎಂ.ಎಚ್. ನಾಗರಾಜು•ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!•ಕಚ್ಚಾ ತೈಲದ ಬೆಲೆ ತೀವ್ರ ಕುಸಿತ& ಆದರೆ ಜನತೆಗಿಲ್ಲ ಇಳಿಕೆಯ ಲಾಭ ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ? ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ವಿವಾಹಿತ ಧರ್ಮಗುರುವಿನೊಂದಿಗೆ ತೆರಳಿದ ಯುವತಿ; ಠಾಣೆಯಲ್ಲೇ ಕಣ್ಣೀರಿಟ್ಟ ಪೋಷಕರು!•ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಮಗು ಜನನ•ಕುಮಾರಧಾರೆಯ ಜಲಜಾಗೃತಿಗೆ ಸಂದ ಜಯ: ಉರುಂಬಿ ತಟದಲ್ಲಿ 'ಪಶ್ಚಿಮ ಘಟ್ಟ ಜೀವವೈವಿಧ್ಯ ಸಂರಕ್ಷಣಾ' ಸಂಕಲ್ಪದ ಶಂಖನಾದ•ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು•ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ & ಎಂ.ಎಚ್. ನಾಗರಾಜು•ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!•ಕಚ್ಚಾ ತೈಲದ ಬೆಲೆ ತೀವ್ರ ಕುಸಿತ& ಆದರೆ ಜನತೆಗಿಲ್ಲ ಇಳಿಕೆಯ ಲಾಭ ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ? ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•
ಮಾರುಕಟ್ಟೆ ದರ
🪙ಚಿನ್ನ 24K (10 ಗ್ರಾಂ):₹78,450+320•
💍ಚಿನ್ನ 22K (10 ಗ್ರಾಂ):₹71,900+290•
🥈ಬೆಳ್ಳಿ (1 ಕೆಜಿ):₹96,200-450•
⛽ಪೆಟ್ರೋಲ್ (ರಾಯಚೂರು):₹103.12(0)•
🛢️ಡೀಸೆಲ್ (ರಾಯಚೂರು):₹89.20+0.12•
📈ಸೆನ್ಸೆಕ್ಸ್:81,245+0.8%•
📊ನಿಫ್ಟಿ 50:24,610+0.6%•
💵ಡಾಲರ್ (USD):₹84.10-0.05•
🪙ಚಿನ್ನ 24K (10 ಗ್ರಾಂ):₹78,450+320•
💍ಚಿನ್ನ 22K (10 ಗ್ರಾಂ):₹71,900+290•
🥈ಬೆಳ್ಳಿ (1 ಕೆಜಿ):₹96,200-450•
⛽ಪೆಟ್ರೋಲ್ (ರಾಯಚೂರು):₹103.12(0)•
🛢️ಡೀಸೆಲ್ (ರಾಯಚೂರು):₹89.20+0.12•
📈ಸೆನ್ಸೆಕ್ಸ್:81,245+0.8%•
📊ನಿಫ್ಟಿ 50:24,610+0.6%•
💵ಡಾಲರ್ (USD):₹84.10-0.05•
ಜಾಹೀರಾತುAdvertisement

ಶಿರಸಿ, ಯಲ್ಲಾಪುರ, ಮುಂಡಗೋಡ ಆಕಾಶದಲ್ಲಿ ಅಪರಿಚಿತ ವಿಮಾನದ ರಂಗವಲ್ಲಿ: ಜನರನ್ನು ಎಚ್ಚರಿಸಬೇಕಿದ್ದ ಇಲಾಖೆಗಳು ನಿದ್ರೆಯಲ್ಲಿ

ಎಂಬ ಪ್ರಶ್ನೆಗಳಿಗೆ ಈವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಬಸವರಾಜ ಹಿರೇಮಠ ✔•ನವೆಂ 7,2026, 08:26 AM
👁1.5K ವೀಕ್ಷಣೆ2 ನಿಮಿಷ ಓದು
ಶಿರಸಿ, ಯಲ್ಲಾಪುರ, ಮುಂಡಗೋಡ ಆಕಾಶದಲ್ಲಿ ಅಪರಿಚಿತ ವಿಮಾನದ ರಂಗವಲ್ಲಿ: ಜನರನ್ನು ಎಚ್ಚರಿಸಬೇಕಿದ್ದ ಇಲಾಖೆಗಳು ನಿದ್ರೆಯಲ್ಲಿ

ಮುಖ್ಯಾಂಶಗಳು

  • •ವಿಮಾನ ಹಾರಾಟದ ಕುರಿತು ಸಾರ್ವಜನಿಕ ವಲಯದಲ್ಲಿ ದಿನಕ್ಕೊಂದು ರೀತಿಯ ಚರ್ಚೆಗಳು ನಡೆಯುತ್ತಿವೆ.
  • •ಮತ್ತೊಂದೆಡೆ, ಈ ಭಾಗದ ಖನಿಜ ಸಂಪನ್ಮೂಲಗಳ ಪರಿಶೀಲನೆಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸರ್ವೆ ನಡೆಸುತ್ತಿರಬಹುದು ಎಂಬ ಊಹಾಪೋಹಗಳೂ ಕೇಳಿಬರುತ್ತಿವೆ.
  • •ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಮಾಹಿತಿ ಇಲ್ಲವೇ?
  • •ಜಿಲ್ಲೆಯ ಭದ್ರತೆ ಹಾಗೂ ಸುರಕ್ಷತೆಯ ಹೊಣೆ ಹೊತ್ತಿರುವ ಪೊಲೀಸ್ ಇಲಾಖೆ ಈ ವಿಮಾನದ ಹಾರಾಟದ ಬಗ್ಗೆ ಮಾಹಿತಿ ಪಡೆದುಕೊಂಡಿದೆಯೇ?

ಶಿರಸಿ:

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕುಗಳ ಆಕಾಶದಲ್ಲಿ ಕಳೆದ ಹತ್ತು ದಿನಗಳಿಂದ ಅಪರಿಚಿತ ವಿಮಾನವೊಂದು ಪದೇಪದೆ ತೀರಾ ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತಿರುವುದು ಸ್ಥಳೀಯರಲ್ಲಿ ಕುತೂಹಲದ ಜೊತೆಗೆ ಆತಂಕವನ್ನೂ ಮೂಡಿಸಿದೆ. ವಿಮಾನ ಎಲ್ಲಿಂದ ಬರುತ್ತಿದೆ? ಯಾವ ಸಂಸ್ಥೆಗೆ ಸೇರಿದ್ದು? ಯಾವ ಉದ್ದೇಶಕ್ಕಾಗಿ ಹಾರಾಟ ನಡೆಸುತ್ತಿದೆ? ಎಂಬ ಪ್ರಶ್ನೆಗಳಿಗೆ ಈವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ವಿಮಾನ ಹಾರಾಟದ ಕುರಿತು ಸಾರ್ವಜನಿಕ ವಲಯದಲ್ಲಿ ದಿನಕ್ಕೊಂದು ರೀತಿಯ ಚರ್ಚೆಗಳು ನಡೆಯುತ್ತಿವೆ. ಕೆಲವರು ಇದೊಂದು ನದಿ ತಿರುವು ಯೋಜನೆ ಸರ್ವೆ ವಿಮಾನ ಎನ್ನುತ್ತಿದ್ದರೆ, ಇನ್ನು ಕೆಲವರು ತರಬೇತಿ ವಿಮಾನ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ, ಈ ಭಾಗದ ಖನಿಜ ಸಂಪನ್ಮೂಲಗಳ ಪರಿಶೀಲನೆಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸರ್ವೆ ನಡೆಸುತ್ತಿರಬಹುದು ಎಂಬ ಊಹಾಪೋಹಗಳೂ ಕೇಳಿಬರುತ್ತಿವೆ. ಆದರೆ, ಇವುಗಳಲ್ಲಿ ಯಾವುದು ಸತ್ಯ ಎಂಬುದನ್ನು ದೃಢಪಡಿಸುವ ಅಧಿಕೃತ ಮಾಹಿತಿ ಮಾತ್ರ ಲಭ್ಯವಾಗಿಲ್ಲ.

ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಮಾಹಿತಿ ಇಲ್ಲವೇ?

ಒಂದು ಪ್ರದೇಶದಲ್ಲಿ ನಿರಂತರವಾಗಿ, ಅದರಲ್ಲೂ ತೀರಾ ಕೆಳಮಟ್ಟದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಈ ಕುರಿತು ಸಾರ್ವಜನಿಕರಿಗೆ ಸ್ಪಷ್ಟನೆ ನೀಡದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಜಿಲ್ಲೆಯ ಭದ್ರತೆ ಹಾಗೂ ಸುರಕ್ಷತೆಯ ಹೊಣೆ ಹೊತ್ತಿರುವ ಪೊಲೀಸ್ ಇಲಾಖೆ ಈ ವಿಮಾನದ ಹಾರಾಟದ ಬಗ್ಗೆ ಮಾಹಿತಿ ಪಡೆದುಕೊಂಡಿದೆಯೇ? ಜಿಲ್ಲಾಡಳಿತಕ್ಕೆ ಈ ಕುರಿತು ಅಧಿಕೃತ ಮಾಹಿತಿ ಬಂದಿದೆಯೇ? ಹಾರಾಟಕ್ಕೆ ಅನುಮತಿ ನೀಡಿರುವ ಸಂಸ್ಥೆ ಯಾವುದು? ವಿಮಾನದ ಉದ್ದೇಶವೇನು? ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.

ಶಿರಸಿ ನಗರದ ಮೇಲೂ ವಿಮಾನ ಹಾರಾಟ: ಸುರಕ್ಷತೆಯ ಪ್ರಶ್ನೆ

ಶುಕ್ರವಾರವೂ ಶಿರಸಿ ಹಾಗೂ ಯಲ್ಲಾಪುರ ತಾಲೂಕುಗಳ ವಿವಿಧ ಭಾಗಗಳಲ್ಲಿ ವಿಮಾನ ಹಾರಾಟ ಮುಂದುವರಿದಿದೆ. ಶಿರಸಿ ನಗರದ ಪ್ರದೇಶಗಳು, ಗ್ರಾಮೀಣ ಭಾಗ, ಬನವಾಸಿ ರಸ್ತೆ, ಚಿಪಗಿ ಸೇರಿದಂತೆ ಹಲವು ಕಡೆಗಳಲ್ಲಿ ವಿಮಾನ ತೀರಾ ಕೆಳಮಟ್ಟದಲ್ಲಿ ಹಾರಾಟ ನಡೆಸಿರುವುದು ಸಾರ್ವಜನಿಕರ ಗಮನ ಸೆಳೆದಿದೆ.

ಶಿರಸಿ ನಗರದಲ್ಲಿ ಬಹುಮಹಡಿ ಕಟ್ಟಡಗಳೂ ಇರುವುದರಿಂದ ಇಂತಹ ಹಾರಾಟದ ವೇಳೆ ಕಟ್ಟಡಗಳು, ಜನವಸತಿ ಪ್ರದೇಶಗಳು ಹಾಗೂ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ವಿಮಾನ ಹಾರಾಟದ ವೇಳೆ ಯಾವುದೇ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂಬ ಪ್ರಶ್ನೆಯೂ ಸಹಜವಾಗಿಯೇ ಎದುರಾಗಿದೆ. ಹೀಗಾಗಿ, ವಿಮಾನದ ಹಾರಾಟದ ಮಾರ್ಗ, ಎತ್ತರ ಹಾಗೂ ಅನುಮತಿಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುವ ಅಗತ್ಯವಿದೆ.

ನದಿ ತಿರುವು ಯೋಜನೆಯ ಆತಂಕದ ನಡುವೆ ಮತ್ತೊಂದು ಅನುಮಾನ!

ಈಗಾಗಲೇ ಯಲ್ಲಾಪುರ, ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳ ಜನರು ಬೇಡ್ತಿ–ವರದಾ ಸೇರಿದಂತೆ ನದಿ ತಿರುವು ಯೋಜನೆಗಳ ಚರ್ಚೆ ಮತ್ತು ಸಮೀಕ್ಷೆಗಳ ವಿಚಾರವಾಗಿ ಆತಂಕ ಹಾಗೂ ಹಲವು ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಕಾಶದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಅಪರಿಚಿತ ವಿಮಾನ ಜನರ ಮನಸ್ಸಿನಲ್ಲಿ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಈ ವಿಮಾನ ಹಾರಾಟಕ್ಕೂ ನದಿ ತಿರುವು ಯೋಜನೆಗೂ ಸಂಬಂಧವಿದೆಯೇ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದರೂ, ಅದಕ್ಕೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಆದ್ದರಿಂದ ಊಹಾಪೋಹಗಳಿಗೆ ಅವಕಾಶ ನೀಡದೆ ನೈಜ ಸಂಗತಿಗಳನ್ನು ಅಧಿಕಾರಿಗಳು ಬಹಿರಂಗಪಡಿಸಬೇಕಿದೆ.

ಜನರ ಆತಂಕ ದೂರ ಮಾಡುವುದು ಆಡಳಿತದ ಜವಾಬ್ದಾರಿಯಲ್ಲವೇ?

ವಿಮಾನ ಹಾರಾಟದ ಉದ್ದೇಶವನ್ನು ತಿಳಿದುಕೊಳ್ಳುವುದು ಸಾರ್ವಜನಿಕರ ಸಹಜ ಕುತೂಹಲ. ಈ ಕುರಿತು ಪ್ರಶ್ನೆಗಳನ್ನು ಕೇಳುವುದು ಅಥವಾ ಸ್ಪಷ್ಟನೆ ಬಯಸುವುದು ತಪ್ಪಲ್ಲ. ಆದರೆ, ಅಧಿಕೃತ ಮಾಹಿತಿ ಇಲ್ಲದಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಊಹಾಪೋಹಗಳು ಹರಿದಾಡುತ್ತಿವೆ.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ಈ ವಿಮಾನದ ಮೂಲ, ಮಾಲೀಕತ್ವ, ಹಾರಾಟಕ್ಕೆ ಪಡೆದಿರುವ ಅನುಮತಿ, ಉದ್ದೇಶ ಮತ್ತು ಕಾರ್ಯಾಚರಣೆಯ ವ್ಯಾಪ್ತಿಯ ಕುರಿತು ಮಾಹಿತಿ ಸಂಗ್ರಹಿಸಿ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು.

ವಿಮಾನ ಹಾರಾಟದ ಹಿಂದೆ ಏನಿದೆ ಎಂಬುದಕ್ಕಿಂತ, ಅದು ಏಕೆ ನಡೆಯುತ್ತಿದೆ ಎಂಬುದನ್ನು ಜನರಿಗೆ ತಿಳಿಸುವುದು ಈಗಿನ ಅಗತ್ಯ. ಅಧಿಕಾರಿಗಳ ಮೌನಕ್ಕೆ ಬದಲಾಗಿ ಅಧಿಕೃತ ಉತ್ತರ ಸಿಗಬೇಕಿದೆ. ಜನರ ಆತಂಕ ನಿವಾರಿಸುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ.

ಜಾಹೀರಾತುAdvertisement

📢 ಸಂಪಾದಕೀಯ ತಿದ್ದುಪಡಿ ಮತ್ತು ಸ್ಪಷ್ಟೀಕರಣ:

ಈ ಸುದ್ದಿಯಲ್ಲಿ ತಪ್ಪು ಕಂಡುಬಂದರೆ ನಮ್ಮ ಸಂಪಾದಕೀಯ ತಂಡಕ್ಕೆ ತಿಳಿಸಿ, ನಾವು ಸರಿಪಡಿಸುತ್ತೇವೆ. ಇಮೇಲ್ ಮಾಡಿ: news@sirwar360.in ಅಥವಾ ಕರೆ ಮಾಡಿ: +91 94480 36036.

Comments (0)

Join or log in to comment.

    ನಮ್ಮ ವಾಟ್ಸಾಪ್ ಗುಂಪಿಗೆ ಸೇರಿ

    ತಾಜಾ ಸುದ್ದಿ ಮೊದಲು ನಿಮ್ಮ ಮೊಬೈಲ್‌ಗೆ.

    ಕ್ಷಣ ಕ್ಷಣದ ಸುದ್ದಿಸಂಪೂರ್ಣ ಉಚಿತವರದಿಗಾರರ ನೇರ ಅಪ್‌ಡೇಟ್
    ಈಗ ಸೇರಿ